ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘ (ರಿ) ಚಟುವಟಿಕೆಗಳು:
- ಶ್ರೀಗಳ ದರ್ಶನಾರ್ಥಿಗಳಾಗಿ ಬರುವ ಭಕ್ತಾದಿಗಳಿಗೆ ನಿತ್ಯ ಪ್ರಸಾದದ ವ್ಯವಸ್ಥೆ.
- ಶ್ರೀ ಕ್ಷೇತ್ರದಲ್ಲಿ ಆಗಾಗ್ಗೆ ಸಹಕಾರಿ ಹಾಗೂ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ನಡೆಯಲ್ಪಡುವ ಕಾರ್ಯಕ್ರಮಗಳಿಗೆ ಪೂರಕವಾಗಿ ಪ್ರಸಾದ ಮುಂತಾದ ವ್ಯವಸ್ಥೆ ಏರ್ಪಡಿಸುವದು.
ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘ (ರಿ.) ವತಿಯಿಂದ ನಡೆಯುವ ಸೇವೆಗಳು
- ರೂ.2008/- ಅಥವಾ ಮೇಲ್ಪಟ್ಟು ಖಾಯಂ ಠೇವಣಿ ಮಾಡಿಸಿದವರ ಹೆಸರಲ್ಲಿ ವರ್ಷದಲ್ಲೊಂದು ದಿನ ಠೇವಣಿದಾರರ ಅಭಿಲಾಷೆಯಂತೆ ಶ್ರೀ ಗಳಿಗೆ ಅಭಿಷೇಕ ಹಾಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗುವುದು.
- ರೂ.10,000/- ಸಲ್ಲಿಸಿದಲ್ಲಿ ಒಂದು ಅಮವಾಸ್ಯೆ ದಿನ ಅನ್ನಸಂತರ್ಪಣೆ ನಡೆಸಲಾಗುವುದು.
- ರೂ.3000/- ಸಲ್ಲಿಸಿದಲ್ಲಿ ಒಂದು ಸೋಮವಾರದ ದಿನ ಅನ್ನಸಂತರ್ಪಣೆ ನಡೆಸಲಾಗುವುದು.
- ರೂ.25,000/- ಅಥವಾ ಮೇಲ್ಪಟ್ಟು ಹಣ ಸಲ್ಲಿಸಿದಲ್ಲಿ ವಿಶೇಷ ಕಾರ್ಯಕ್ರಮಗಳಾದ ಜೇಷ್ಠ ಶು|| ಷಷ್ಠಿ (ಶ್ರೀಗಳ ಜಾತ್ರಾದಿನ ) ಹಾಗೂ ಜೇಷ್ಠ ಶುದ್ಧ ಸಪ್ತಮಿ (ಹೂವಿನ ರಥೋತ್ಸವ), ಕಾರ್ತೀಕ ಮಾಸದಲ್ಲಿ ನಡೆಯುವ ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವದ ದಿನದಂದು ಮಹಾದಾಸೋಹವನ್ನು ಅವರ ಹೆಸರಿನಲ್ಲಿ ನಡೆಸಲಾಗುವುದು.
ಸೂಚನೆ:
ಭಕ್ತಾದಿಗಳು ತಮ್ಮ ಶಕ್ತಾನುಸಾರ ಕಾಣಿಕೆ ಹಾಗೂ ಧಾನ್ಯಗಳನ್ನು ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘಕ್ಕೆ ಸಲ್ಲಿಸಿ ರಶೀದಿ ಪಡೆದು ಶ್ರೀಗಳ ದಾಸೋಹ ನಿರಂತರವಾಗಿ ನಡೆಯಲು ಸಹಕರಿಸಿ, ಶ್ರೀ ಎರ್ರಿಸ್ವಾಮಿಗಳ ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕಾಗಿ ವಿನಂತಿ.
ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘ(ರಿ.) ಚೇಳ್ಳಗುರ್ಕಿ.